ಬಡ ಮುತ್ತೈದೆಯ ಉಪ್ಪಿಟ್ಟು - ಡಾಕ್ಟರ್ ಕೆ. ಆರ್. ಎಸ್. ಮೂರ್ತಿ-

ಬಡ ಮುತ್ತೈದೆಯ ಉಪ್ಪಿಟ್ಟು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ತವರಿನಲ್ಲಿ ಉಪ್ಪಿಟ್ಟು ಕಡು ಬಡತನದ ಮುತ್ತೈದೆಯದು;
ಬೆವರಿನಲ್ಲಿ ಬೇಯಿಸಿದ ರವೇ, ಅಕ್ಕಿಯ ತರಿಯು ರುಚಿಯು.
ನಾನಲ್ಲೆದೆಯೇ ನನ್ನ ಸೋದರ ಸಂಬಂಧಿಗಳೂ ಮೆದ್ದ ಉಪ್ಪಿಟ್ಟು.
ಎಲ್ಲಿಂದಲೋ ಬಂದು ಒಕ್ಕರಿಸಿದ ಅತಿಥಿಯರಿಗೂ ಅಕ್ಕರೆಇಟ್ಟು
ಮಕ್ಕಳೇ ಒಂಬತ್ತು, ತಾನೂ, ತನ್ನವರೂ, ಅತ್ತೆ, ಮಾವರಿಗೂ ಅದೇ
ಹೊಕ್ಕಳು ಸಂತತಿ, ಮಕ್ಕಳ ಸಂತತಿ, ಮೊಮ್ಮಕ್ಕಳ ಸಾಮ್ಯರಿಗೂ ಇದೇ
ಬಡ ಮುತ್ತೈದೆಯ ಕೈಗುಣದ ಬಲು ರುಚಿಯು ಮೆದ್ದವರಿಗೆ ಗೊತ್ತು
ಪಡುವಣದ ಬೆಡಗಿನ ಹತ್ತಾರು ತರಕಾರಿ, ಮೂಲಿಕಾ ಸೊಪ್ಪು ಇತ್ತೂ,
ಬೆಣ್ಣೆ, ತುಪ್ಪಗಳೂ ಬೆರೆಸಿ, ಅಲಂಕಾರದ ಅಡಿಗೆಯ ಮನೆಗಳಲ್ಲಿ
ಬಣ್ಣ, ಬಣ್ಣದ ತಟ್ಟೆ, ಲೋಟ, ಪರಕೀಯ ದೊನ್ನೆ, ಇತರಗಳಲ್ಲಿ
ಅತೀ ಹೆಮ್ಮೆಯಲಿ ತಾವೂ, ತಮ್ಮ ಮಡದಿ ಮಕ್ಕಳ ಸಮೇತ
ಮತಿಯಲ್ಲಿ ಮಾತ್ರ ಮೂತೃವಿನ ಮುತ್ತೈದೆ ಬಡವಳ ರುಚಿಯಿತ್ತಾ?

M Group Capital advises medium and large private and public companies to the BOD and CEO level on technology in accelerated corporate growth strategic alliances, partnerships, financial advisory, and Mergers & Acquisitions above $50 M to multi-billion dollars in the USA and other countries. We are advisers to corporations, angel groups, VCs, corporate investments and private equity

Comments

Popular posts from this blog

Murthy's Single Alphabet Etymology of Vedic Nakshatra System

PM Modi's Unpardonable Public Behavior in the Vatican Dr. KRS Murthy

Murthy's 2020 Webinars and Courses